Posts

ಕೃಷ್ಣ - ಬಗೆದಷ್ಟೂ ಮುಗಿಯದ ಹೊನಲು - ಸಂಪುಟ 1

Image
ಕೃಷ್ಣ - ಬಗೆದಷ್ಟೂ ಮುಗಿಯದ  ಹೊನಲು - ಸಂಪುಟ 1 ಕೃಷ್ಣನ ಬಗ್ಗೆ ಶತಮಾನಗಳಿಂದಲೂ ಕುತೂಹಲ ಮೂಡಿಸಿಕೊಂಡಿರುವ ಜನ ಬಹಳಷ್ಟು . ಆ ಪಾತ್ರವೇ ಹಾಗೆ. ಎಷ್ಟು ತಿಳಿದುಕೊಂಡರೂ ಮತ್ತಷ್ಟು ರೋಚಕತೆ ಭಾವುಕತೆ ಅಪ್ಯಾಯತೆ ಭಕ್ತಿ ಭಾವಗಳು ಮೂಡಿಕೊಳ್ಳುತ್ತವೆ ಮತ್ತು ಇನ್ನಷ್ಟು ತಿಳಿದುಕೊಳ್ಳಲು ಪ್ರೇರೇಪಿಸುತ್ತದೆ. ಮೂಲ ಮಹಾಭಾರತದಲ್ಲಿ ಇರುವ ಕೃಷ್ಣನ ಚಿತ್ರಣವನ್ನು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ವಿವರಿಸುವಾಗ ನಂಗೆ ತಿಳಿಯದಂತೆಯೇ ಕೃಷ್ಣನ ಮೇಲೆಇನ್ನಷ್ಟು ಬಂಧ  ಭಕ್ತಿ ಭಾವಗಳು ಹುಟ್ಟಿಕೊಂಡು ಅವನ ಬಗ್ಗೆ ತಿಳಿಯುವ ಹಂಬಲ ಹುಟ್ಟಿತು. ಪೂಜ್ಯರ ಪ್ರವಚನದಿಂದ ನಾನೇನು ತಿಳಿದುಕೊಂಡೆನೋ ಅದನ್ನು ಸಮಾನಾಸಕ್ತರಿಗಾಗಿ ಪದಗಳ ಪೋಣಿಕೆಯಲ್ಲಿ ಬರೆಯುತ್ತಿದ್ದೇನೆ .  ಮೊದಲಿಗೆ facebook ನಲ್ಲಿ "ಕೃಷ್ಣ - ಬಗೆದಷ್ಟೂ ಮುಗಿಯದ  ಹೊನಲು" ಶೀರ್ಷಿಕೆಯಡಿಯಲ್ಲಿ ಬರೆದುಕೊಂಡಾಗ ಕೆಲವು ಸ್ನೇಹಿತರು Blog ಬರೆಯುವ ಸಲಹೆ ಕೊಟ್ಟರು ಮತ್ತು ಅಲ್ಲಿ ನನ್ನ ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ತಮ್ಮೆಲ್ಲರಿಗೂ ನಮಸ್ಕಾರಗಳು....  ಶ್ರೀ ಕೃಷ್ಣನಿಗೆ  ಮತ್ತು ಬನ್ನಂಜೆಯವರಿಗೆ ಸಾಷ್ಟಂಗ ಪ್ರಣಾಮಗಳು......  ಮೊದಲನೇ ಕಂತಿನಲ್ಲಿ 10 ಭಾಗಗಳಲ್ಲಿ ಕೃಷ್ಣ ಸಂಧಾನದ ಪ್ರಸಂಗದ ಕೃಷ್ಣನ ವ್ಯಕ್ತಿತ್ವ ಮತ್ತು ಮಹಾಭಾರತದ ಆಶಯ ಸಂದೇಶಗಳನ್ನು ನೋಡೋಣ.  ಕೃಷ್ಣ - ಬಗೆದಷ್ಟೂ ಮುಗಿಯದ  ಹೊನಲು - ಭಾಗ...